ಮಳೆ ಇರಲಿ ಬಿಸಿಲಿರಲಿ No Excuse: ನಟ ಅನಿಲ್ ಕಪೂರ್

ಮಳೆ ಇರಲಿ ಬಿಸಿಲಿರಲಿ No Excuse: ನಟ ಅನಿಲ್ ಕಪೂರ್
ಅನಿಲ್ ಕಪೂರ್

ವಯಸ್ಸು 63 ಆದ್ರು ಈಗಲೂ 23ರ ಹುಡುಗರ ಹಾಗೆ ಚಟುವಟಿಕೆಯಿಂದ ಇರ್ತಾರೆ ಬಾಲಿವುಡ್ ನಟ ಅನಿಲ್ ಕಪೂರ್. 36 ವರ್ಷಗಳ ಹಿಂದೆ ತೆರೆ ಕಂಡ ಕನ್ನಡ ಚಿತ್ರ ಪಲ್ಲವಿ ಅನುಪಲ್ಲವಿ ಯಲ್ಲಿ ಅಭಿನಯಿಸಿದ ಅನಿಲ್ ಕಪೂರ್  ಈಗಲೂ ಅದೇ ಚಟುವಟಿಕೆಯಿಂದ ಇದ್ದಾರೆ. ಇದರ ರಹಸ್ಯವನ್ನು ಅವರು ತಮ್ಮ ಟ್ವಿಟ್ಟರ್ ನಲ್ಲಿ  ಹೇಳಿದ್ದಾರೆ, ಅದೇನೆಂದರೆ ಮಳೆ ಇರಲಿ ಬಿಸಿಲಿರಲಿ ತಮ್ಮ ಫಿಟ್ನೆಸ್ ನಡೆಯುತ ಇರುತ್ತದೆ ಎಂದು ವಿಡಿಯೋ ವನ್ನು ಟ್ವಿಟ್ ಮಾಡಿದ್ದಾರೆ. 

ಇತ್ತೀಚೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ ಫಿಟ್ ​ಇಂಡಿಯಾ ಅಭಿಯಾನದ ಭಾಗವಾಗಿ ಅನಿಲ್ ಕಪೂರ್ ವಿಡಿಯೋವೊಂದನ್ನ ಶೇರ್​ ಮಾಡಿದ್ದಾರೆ. ಈ ವಿಡಿಯೋವನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಸಚಿವ ಕಿರಣ್​ ರಿಜಿಜು ಅವರಿಗೆ ಟ್ಯಾಗ್ ಮಾಡಿದ್ದಾರೆ.