ಉಪ್ಪಿಯಿಂದ ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬದ ವಿನಂತಿ

ಉಪ್ಪಿಯಿಂದ ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬದ ವಿನಂತಿ

ಸೆಪ್ಟೆಂಬರ್ 18 ರಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬವಿದೆ. ಅಂದು ಅಭಿಮಾನಿಗಳು ಉಪ್ಪಿ ಮನೆಗೆ ಕೇಕು ಮತ್ತು ಗಿಫ್ಟ್ ನೊಂದಿಗೆ ಬಂದು ಶುಭಾಶಯವನ್ನು ಕೋರುವುದು ವಾಡಿಕೆಯಾಗಿದೆ. ಆದರೆ ಈ ಭಾರಿ ಉಪೇಂದ್ರರವರು ಅಭಿಮಾನಿಗಳೊಂದಿಗೆ ತಮ್ಮ ಹುಟ್ಟುಹಬ್ಬದ ಕುರಿತು ಟ್ವಿಟ್ಟರ್ ನಲ್ಲಿ ಒಂದು ಮನವಿಯನ್ನು ಮಾಡಿದ್ದಾರೆ. 

ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ...
ಸೆಪ್ಟೆಂಬರ್ 18  "ಅಭಿಮಾನಿಗಳ ದಿನ", ಅಂದು ದಯವಿಟ್ಟು  ತಾವುಗಳು ಯಾರೂ  ಕೇಕ್, ಹೂವಿನ ಹಾರ ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ.. ತರಲೇ ಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅದನ್ನು ಪೋಷಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ...
-ನಿಮ್ಮ ಉಪೇಂದ್ರ