ಎಸ್ ಎಸ್ ಎಲ್ ಸಿ ಪರೀಕ್ಷೆಯ ಕುರಿತು ಮಹತ್ವದ ತೀರ್ಪು

ಎಸ್ ಎಸ್ ಎಲ್ ಸಿ ಪರೀಕ್ಷೆಯ ಕುರಿತು ಮಹತ್ವದ ತೀರ್ಪು

ಕೊರೋನಾ ಎಲ್ಲೆಡೆ ಹಬ್ಬುತ್ತಲಿದ್ದು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ರದ್ದು ಪಡಿಸಬೇಕೆಂದು ವಕೀಲ ಲೋಕೇಶ್ ಎಂಬುವವರು  ಹೈಕೋರ್ಟ್ ನಲ್ಲಿ ಪಿ ಐ ಎಲ್ ಸಲ್ಲಿಸಿದ್ದರು. ಇದರ ಕುರಿತು ಇಂದು(ಬುಧವಾರ) ಕರ್ನಾಟಕ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಕೈ ಗೊಂಡ ಮಾಹಿತಿಯನ್ನು ಕೇಳಿದ್ದ ಹೈಕೋರ್ಟ್ ಇಂದು ಅದನ್ನು ಗಮನಿಸಿ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಯಾವುದೇ ವಿದ್ಯಾರ್ಥಿಗೆ ತೊಂದರೆಯಾಗದಂತೆ ಅಗತ್ಯ ಕ್ರಮವನ್ನು ತೆಗೆದುಕೊಂಡು ಪರೀಕ್ಷೆಯನ್ನು ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಇದೆ ಜೂನ್ ತಿಂಗಳ 25 ರಿಂದ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಸಿದ್ದತೆಯನ್ನು ಮಾಡಿಕೊಂಡಿದೆ. ಇನ್ನೊಂದೆಡೆ ಕೊರೋನಾ ಸೋಂಕು ಹೆಚ್ಚುತ್ತಿದೆ.