ಮ್ಯಾನ್ಸೂನ್ ವಿಶೇಷ ಅವಲಕ್ಕಿ ಪಕೋಡ

ಮ್ಯಾನ್ಸೂನ್ ವಿಶೇಷ ಅವಲಕ್ಕಿ ಪಕೋಡ
ಅವಲಕ್ಕಿ ಪಕೋಡ

ಜನರು ಮಳೆಗಾಲದಲ್ಲಿ ಮಸಾಲೆಯುಕ್ತ, ಟೇಸ್ಟಿ ಆಹಾರವನ್ನು ಸವಿಯಲು ಬಯಸುತ್ತಾರೆ. ವಿಭಿನ್ನ ಮತ್ತು ಆರೋಗ್ಯಕರ ಅವಲಕ್ಕಿ ಪಕೋಡಾವನ್ನು ಮಾಡುವುದು ಹೇಗೆಂದು ನೋಡೋಣ.

ಅವಲಕ್ಕಿ ಪಕೋಡಾ ತಯಾರಿಸಲು ಬೇಕಾದ ಪದಾರ್ಥಗಳು:

  • ಅವಲಕ್ಕಿ 1 ಕಪ್
  • ಮೈದಾ 1 ಕಪ್
  • ಕಡಲೆಹಿಟ್ಟು 1 ಕಪ್
  • ಮೆಣಸಿನಕಾಯಿ 3 ರಿಂದ 4
  • ರುಚಿಗೆ ತಕ್ಕಂತೆ ಉಪ್ಪು
  • ಹುರಿಯಲು ಎಣ್ಣೆ

ಅವಲಕ್ಕಿ ಪಕೋಡಾವನ್ನು ಹೇಗೆ ತಯಾರಿಸುವುದು:

  1. ಅವಲಕ್ಕಿಯನ್ನು 15 ನಿಮಿಷ ನೆನೆಸಿ.
  2. ನಂತರ ನೆನೆಸಿದ ಅವಲಕ್ಕಿಯಿಂದ ನೀರನ್ನು ತೆಗೆದು ಅದಕ್ಕೆ ಮೈದಾ, ಕತ್ತರಿಸಿದ ಮೆಣಸಿನಕಾಯಿ, ಕಡಲೆಹಿಟ್ಟು , ಉಪ್ಪನ್ನು ಮಿಶ್ರಣ ಮಾಡಿ.
  3. ಎಲ್ಲವನ್ನು ಬೆರೆಸಿದ ನಂತರ ಅದನ್ನು ಪಕೋಡಾ ಆಕಾರದಲ್ಲಿ ಮಾಡಿ ನಂತರ ಗೋಲ್ಡನ್ ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ.
  4. ಈಗ ಬಿಸಿ ಬಿಸಿ ಅವಲಕ್ಕಿ ಪಕೋಡಾ ತಿನ್ನಲು ಸಿದ್ಧವಾಗಿದೆ.

ನೀವು ಯಾವುದೇ ಸಲಹೆಗಳನ್ನು ನೀಡಲುಬಯಸಿದರೆ ದಯವಿಟ್ಟು ಕಾಮೆಂಟ್‌ಗಳನ್ನು ಕಳುಹಿಸಿ ಮತ್ತು ನಮ್ಮ ಲೇಖನವನ್ನು ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ.