ಕೊರೋನಾ ಲಕ್ಷಣವೇ ಇಲ್ಲ ರಾಜ್ಯದ 75% ಸೋಂಕಿತರಲ್ಲಿ

ಕೊರೋನಾ ಲಕ್ಷಣವೇ ಇಲ್ಲ ರಾಜ್ಯದ 75% ಸೋಂಕಿತರಲ್ಲಿ

ರಾಜ್ಯದಲ್ಲಿ  ಕೊರೋನಾ ಹೊಸ ಸಮಸ್ಯೆಯನ್ನು ಉಂಟು ಮಾಡಿದೆ. ಕೊರೋನಾ ಸೋಂಕು ದೃಢಪಟ್ಟಒಟ್ಟು ಪ್ರಕರಣಗಳ ಪೈಕಿ ರಾಜ್ಯದಲ್ಲಿ ಬರೋಬ್ಬರಿ ಶೇ.74.50 ಮಂದಿಗೆ ಸೋಂಕಿನ ಲಕ್ಷಣಗಳೇ ವರದಿಯಾಗಿಲ್ಲ. ಇದರಲ್ಲಿ ಶೇ.50ರಷ್ಟು ಜನ ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯೂ ಆಗಿದ್ದಾರೆ ಎಂಬ ವಿಚಾರ ಆರೋಗ್ಯ ಇಲಾಖೆ ಪರಿಶೀಲನೆಯಲ್ಲಿ ತಿಳಿದುಬಂದಿದೆ. ಮೇ 4ರವರೆಗೆ  651 ಪ್ರಕರಣಗಳು ವರದಿಯಾಗಿದ್ದು ಇವುಗಳ ಪೈಕಿ 486 ಮಂದಿಗೆ ಸೋಂಕಿನ ಲಕ್ಷಣಗಳು ವರದಿಯಾಗಿಲ್ಲ. ಸಾವು ಹೊರತುಪಡಿಸಿ ಸಕ್ರಿಯ ಹಾಗೂ ಗುಣಮುಖರಾದ ಶೇ.77.84 ಮಂದಿಗೆ ಸೋಂಕು ಲಕ್ಷಣಗಳು ಕಾಣಿಸಿಯೇ ಇಲ್ಲ. ಶೇ.25.49 ಮಂದಿಗೆ ಮಾತ್ರ ಸೋಂಕಿನ ಲಕ್ಷಣ ಕಾಣಿಸಿದೆ.

ಇದರಿಂದ ಸೋಂಕಿತರಲ್ಲಿ ಸಾಮೂಹಿಕ ರೋಗ ನಿರೋಧಕ ಶಕ್ತಿ ರೂಪುಗೊಳ್ಳುತ್ತಿದೆಯೇ ಎಂಬ ಆಶಾಭಾವನೆಯೂ ಮೂಡಿದರೆ, ಮತ್ತೊಂದೆಡೆ ಇಂತಹ ರೋಗ ಲಕ್ಷಣಗಳಿಲ್ಲದ ಕೊರೋನಾ ಸೋಂಕಿತರು ಪರೀಕ್ಷೆಗೆ ಒಳಪಡದೆ ಮುಕ್ತವಾಗಿ ಓಡಾಡುತ್ತಿರುವುದರಿಂದ ಸಾಕಷ್ಟುಜನರಿಗೆ ಸೋಂಕು ಹರಡುವ ಭಯ ಎದುರಾಗಿದೆ. ಬಹುತೇಕ ಸೋಂಕಿತರಿಗೆ ರೋಗದ ಲಕ್ಷಣಗಳು ಅನುಭವಕ್ಕೆ ಬರುವುದಿಲ್ಲ. ಹೀಗಾಗಿ ಸ್ವಲ್ಪ ಅನಾರೋಗ್ಯದ ಅನುಭವ ಆದರೂ ತಕ್ಷಣ ಡಾಕ್ಟರ್ ಬಳಿ ಹೋಗಿ ತಪಾಸಣೆಗೊಳಪಡಿ. ಸಾಧ್ಯವಾದಷ್ಟು ಮಕ್ಕಳಿಂದ ಹಾಗು ಹಿರಿಯರಿಂದ ದೂರವಿರಿ.