ಬಸ್ಸಲ್ಲಿ ಊರಿಗೆ ಹೋಗ್ಬೇಕು ಅನ್ಕೊಂಡಿದ್ದೀರಾ? ಅಂದ್ರೆ ಇದನ್ನ ತಪ್ಪದೆ ಓದಿ

ಬಸ್ಸಲ್ಲಿ ಊರಿಗೆ ಹೋಗ್ಬೇಕು ಅನ್ಕೊಂಡಿದ್ದೀರಾ? ಅಂದ್ರೆ ಇದನ್ನ ತಪ್ಪದೆ ಓದಿ

ಲಾಕ್ ಡೌನ್ 4.0 ಜಾರಿಯಾದ ಹಿನ್ನಲೆಯಲ್ಲಿ ಬಸ್ ಗಳು ಓಡಾಡಲಿದ್ದು ksrtc  ವಾಯುವ್ಯ ಸಾರಿಗೆ ಮತ್ತು ಈಶಾನ್ಯ ಸಾರಿಗೆಯ ಶೇಕಡಾ 20 ರಿಂದ 25 ರಷ್ಟು ಬಸ್ಸುಗಳು ಕೆಲವು ನಿಭಂದನೆಗಳೊಂದಿಗೆ ಆಯ್ದ ಕೆಲವು ಮಾರ್ಗಗಳಲ್ಲಿ ಮಾತ್ರ ಸಂಚರಿಸಲಿವೆ. 

ನಿಬಂಧನೆಗಳು 

 • ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ 
 • ಗುರುತಿನ ಚೀಟಿ ಕಡ್ಡಾಯ 
 • ನಿಗದಿತ ನಿಲ್ದಾಣದಲ್ಲಿ ಮಾತ್ರ ನಿಲುಗಡೆ 
 • ಊಟ ತಿಂಡಿಗೆಂದು ಎಲ್ಲೂ ನಿಲುಗಡೆಯಿಲ್ಲ 
 • ಒಂದು ಬಸ್ ನಲ್ಲಿ ೩೦ ಜನರಿಗಷ್ಟೆ ಪ್ರಯಾಣ 
 • ಕಡಿಮೆ ಲಗೇಜ್ 
 • ಹಗಲು ವೇಳೆ ಮಾತ್ರ ಬಸ್ ಗಳ ಕಾರ್ಯಾಚರಣೆ 
 • ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ಪ್ರಯಾಣ 
 • ಆರಂಭಿಕ ಕೇವಲ 5 ಮಾರ್ಗಗಳಲ್ಲಿ ಕಾರ್ಯಾಚರಣೆ 

ಐದು ಮಾರ್ಗಗಳು ಯಾವುವೆಂದರೆ 

 1. ಬೆಂಗಳೂರು - ಮೈಸೂರ್ 
 2. ಬೆಂಗಳೂರು - ಶಿವಮೊಗ್ಗ 
 3. ಬೆಂಗಳೂರು - ದಾವಣಗೆರೆ 
 4. ಬೆಂಗಳೂರು - ಹಾಸನ 
 5. ಬೆಂಗಳೂರು - ಮಂಗಳೂರು