ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿಯಿಂದ ಭಾಷಣ

ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿಯಿಂದ ಭಾಷಣ

ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾತ್ರಿ ೮ ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ನೆನ್ನೆ ಪ್ರಧಾನಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಸಂವಾದ ನಡೆಸಿದ್ದರು. ಹಲವು ವಿಷಯಗಳು ಚರ್ಚೆಯಲ್ಲಿ ಬಂದಿದ್ದವು. 3 ನೇ ಹಂತದ ಲಾಕ್ ಡೌನ್ ಇದೆ ಭಾನುವಾರ ಕೊನೆಗೊಳ್ಳಲಿದ್ದು ಇಂದು ಪ್ರಧಾನಿ ಮಾಡಲಿರುವ ಭಾಷಣ ಮಹತ್ವವನ್ನು ಪಡೆದಿದೆ.